Quantcast
Channel: ಹಣ ಕಹಳೆ
Viewing all articles
Browse latest Browse all 16

ಕೇಂದ್ರ ಬಜೆಟ್‌: ಶ್ರೀಮಂತರ ವಾದಕ್ಕೆ ಮಣೆ ಬೇಡ

0
0

ನಮ್ಮ ದೇಶದಲ್ಲಿ ಕೇಂದ್ರ ಸರಕಾರದ ಬಜೆಟ್‌ ಬಹುಮುಖ್ಯ ಆರ್ಥಿಕ ದಾಖಲೆ. ಮುಂದಿನ ಹಣಕಾಸು ವರ್ಷದಲ್ಲಿ ಬರುವ ಆದಾಯವೆಷ್ಟು ಹಾಗೂ ಸರಕಾರ ಆ ಹಣವನ್ನು ಹೇಗೆ ಖರ್ಚು ಮಾಡಲಿದೆ ಎಂಬುದನ್ನು ಈ ಬಜೆಟ್‌ ಪತ್ರ ಸ್ಥೂಲವಾಗಿ ಹೇಳುತ್ತದೆ. ಈ ಸಾಲಿನ ಬಜೆಟ್‌ ಮಂಡನೆಯಾಗಲು ಇನ್ನು ಕೆಲ ವಾರಗಳಷ್ಟೇ ಬಾಕಿಯಿವೆ. ಬಜೆಟ್‌ ಸಿದ್ಧಪಡಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ವಿವಿಧ ಹಿತಾಸಕ್ತಿಯ ಗುಂಪುಗಳು ತಮಗೆ ಬಜೆಟ್‌ನಲ್ಲಿ ಏನು ಸಿಗಬಹುದು ಎಂಬ ಲೆಕ್ಕಾಚಾರವನ್ನೂ ಆರಂಭಿಸಿವೆ. ಆದರೆ ಸರಕಾರ ಇಲ್ಲಿಯವರೆಗೆ ಕಡೆಗಣಿಸಲಾದ ವರ್ಗಗಳನ್ನು ಬಜೆಟ್‌ಗಾಗಿ ಸಂಪರ್ಕಿಸುವ ಯತ್ನ ಮಾಡುತ್ತಿದೆ. ಯಾವಾಗಲೂ ಪ್ರಬಲ ಗುಂಪುಗಳ ಲಾಬಿಯ ಗದ್ದಲದಲ್ಲಿ ದುರ್ಬಲ ವರ್ಗದವರ ಹಿತಾಸಕ್ತಿಗಳು ಕೊಚ್ಚಿಕೊಂಡು ಹೋಗಿ ಬಜೆಟ್‌ನಿಂದ ಮಾಯವಾಗುವ ಸಾಧ್ಯತೆ ಇದ್ದೇ ಇರುತ್ತದೆ.


Viewing all articles
Browse latest Browse all 16

Latest Images

Trending Articles





Latest Images